ಡಿಮೀಟ್ರಿಯಸ್ 2
ಕ್ರಿ.ಪೂ. 4ನೆಯ ಶತಮಾನದಲ್ಲಿದ್ದ ಗ್ರೀಕ್ ಶಿಲ್ಪಿ. ಆತೀನಿಯನ್ ಅಕ್ರೊಪೋಲಿಸ್‍ನಲ್ಲಿ ದೊರೆತ ಶಾಸನಗಳಿಂದ ಈತನ ಕಾಲವನ್ನು ನಿರ್ಣಯಿಸಲಾಗಿದೆ.  ಮೂರ್ತಿಶಿಲ್ಪದಲ್ಲಿ ಬಹಳ ಸಹಜತೆಯನ್ನು ಸಾಧಿಸಿದವನೆಂದು ಪ್ರಾಚೀನ ವಿಮರ್ಶಕರು ಇವನನ್ನು ಹೊಗಳಿದ್ದಾರೆ.  ಈತನ ಕೃತಿಯಾದ ಕಾರಿಂತಿನ ಸೇನಾನಾಯಕ ಪೆಲಿಕಸ್‍ನ ಶಿಲಾಮೂರ್ತಿಯನ್ನು ಲ್ಯೂಷನ್ ಬಹುವಾಗಿ ಮೆಚ್ಚಿದ್ದ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ